ಅಮೆರಿಕನ್‌ ಸರಿನಾ?

ಪತ್ರಿಕೆಗಳಲ್ಲಿ ಅಮೆರಿಕನ್‌, ಬಾಂಗ್ಲನ್‌ ಇತ್ಯಾದಿ ಕಂಗ್ಲಿಷ್‌ ಪದಗಳು ಬಳಕೆಯಾಗುತ್ತವೆ. ಇದು ಸರಿಯೋ ತಪ್ಪೋ ಎಂಬುದು ಜಿಜ್ಞಾಸೆ. ಸುದ್ದಿಮನೆಗಳಲ್ಲಿರುವ ಹಿರಿಯರು ಸ್ವಲ್ಪ ಎಚ್ಚರ ವಹಿಸಿದರೆ ಇಂಥ ಕಂಗ್ಲಿಷ್‌ ಪದಗಳ ಬಳಕೆಯನ್ನು ತಪ್ಪಿಸಬಹುದು. ಬದಲಿಗೆ ಹೊಸ ಕನ್ನಡ ಪ್ದ ಸೃಷ್ಟಿಸಬಹುದು. ಏಮೆರಿಕನ್‌ ಬದಲಿಗೆ ಅಮೆರಿಕಿಗ, ಬಾಂಗ್ಲಿಗ ಎಂದು ಬಳಸಬಹುದು. ಅದೇ ರೀತಿ ಶ್ರೀಲಂಕನ್‌ ಎಂದು ಬಳಸುತ್ತಾರೆ. ಅದರ ಬದಲಿಗೆ ಶ್ರಿಲಂಕಿಗ,ಆಫ್ರಿಕನ್‌ ಬದಲಿಗೆ ಆಫ್ರಿಕದವ, ಚೈನೀಸ್‌ ಬದಲಿಗೆ ಚೀನಿಗ, ಹಾಗೆಯೇ ಜಪಾನಿಗ ಎಂದು ಬಳಸಬಹುದು. ಇದು ಕನ್ನಡದ ಶಬ್ದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ಇಗ ಪ್ರತ್ಯಯದ ಬಳಕೆ ಶಬ್ದಮಣಿ ದರ್ಪಣದಲ್ಲಿಯೇ ಇದೆ.

Comments